ಆಧ್ಯಾತ್ಮಿಕ ಗುರುಗಳು, ಉಲೆಮಾಗಳು, ಪುರೋಹಿತರು, ಮುಲ್ಲಾಗಳು ಹಾಗೂ ಪಂಡಿತರು ಸಮರ್ಥಿಸುವಂತಹ - ತೀರ್ವವಾದ, ಭಯೋತ್ಪಾಧನೆ ಹಾಗೂ ಮೂರ್ತಿ ಆರಾಧನೆಯ ಸಿದ್ಧಾಂತಗಳಿಂದ ಬೇರ್ಪಡಲು ಇಚ್ಛಿಸುವ ಮುಸ್ಲಿಮರು - 

ತಪ್ಪದೇ ಓದಬೇಕಾದ ಲೇಖನ.  


‘ಶಾಂತಿ ಮತ್ತು ಸಾಮರಸ್ಯದಲ್ಲಿ ಒಗ್ಗಟ್ಟಾಗಿ ಹೇಗೆ ಜೀವಿಸಬಹುದು?’ ಎಂಬ ಪರಿಣಾಮಕಾರಿ ಮಾರ್ಗದರ್ಶನವನ್ನು, ಇದುವರೆಗೆ ಯಾವುದೇ ಸಂಘಟಿತ ಧರ್ಮವು ಮಾನವಕುಲಕ್ಕೆ ಒದಗಿಸಿಲ್ಲ. ಧರ್ಮಗಳು ಬರೇ ಭಿನ್ನಭಿಪ್ರಾಯಗಳನ್ನು ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸಿದೆ. ಅದರ ಸಿದ್ಧಾಂತಗಳು, ನಮ್ಮನ್ನು ಜೀವನದ ಬೆಳಕಿನಿಂದ ಆಳವಾದ ಪ್ರಪಾತಕ್ಕೆ ಕೊಂಡೊಯ್ಯುತ್ತದೆ. ಜನರು ಈಗ ಸಾಮೂಹಿಕ ವಶೀಕರಣ ಮತ್ತು ಮಾನಸಿಕ ಬಂಧನದಲ್ಲಿ ವಾಸಿಸುತ್ತಿದ್ದಾರೆ. ನಾವು ಹೊರೆಯನ್ನು ಇಳಿಸುವ ಮತ್ತು ನಮ್ಮನ್ನು ಬಂಧಿಸಿದ ಸರಪಳಿಗಳನ್ನು ಮುರಿಯುವ ಸವಾಲನ್ನು ಕೈಗೆತ್ತಿಕೊಳ್ಳುವ ಧೈರ್ಯವನ್ನು ಕಳೆದುಕೊಂಡಿದ್ದೇವೆಯೇ?


ನಿಸ್ಸಂಶಯವಾಗಿಯೂ, ಈ ಲೇಖನವು ವಿಶ್ವದ ಮುಸ್ಲಿಮರನ್ನು ಆಘಾತಗೊಳಿಸುತ್ತದೆ, ಆದರೂ ಅವರಲ್ಲಿ ವಿಮರ್ಶಾತ್ಮಕ ಚಿತ್ತವಿರುವರನ್ನು ಇದು ಬಂಧನದಿಂದ ಮುಕ್ತರನ್ನಾಗಿಸುತ್ತದೆ. ಇದು ಕೇವಲ ಕುರ್'ಆನಿನ ಆಧಾರದ ಮೇಲೆ ನೈಜ್ಯ ಇಸ್ಲಾಮನ್ನು ಅನ್ವೇಷಿಸುವವರಿಗಾಗಿ ಬರೆಯಲಾಗಿದೆ.